ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ದಿ:-25.01.1955 ರಲ್ಲಿ ಸ್ಥಾಪನೆಯಾಗಿರುತ್ತದೆ. ಬ್ಯಾಂಕ್ ರಿಜಿಸ್ಟ್ರೇಷನ್ ಸಂಖ್ಯೆ:ಎ.ಆರ್.ಸಿ. 534 ರ ಪ್ರಕಾರ ನೋಂದಾಯಿಸಲ್ಪಟ್ಟಿರುತ್ತದೆ. ಬ್ಯಾಂಕಿನ ಆಡಳಿತ ವ್ಯಾಪ್ತಿಯು ಚಿತ್ರದುರ್ಗ ಜಿಲ್ಲೆಯ ಪೂರ್ಣ ವ್ಯಾಪ್ತಿಯನ್ನೊಳಗೊಂಡಿರುತ್ತದೆ. ಬ್ಯಾಂಕ್ ಕಳೆದ 62 ವರ್ಷಗಳಿಂದ ರೈತ ಬಾಂಧವರ ಅವಶ್ಯಕತೆಗೆ ಅನುಗುಣವಾಗಿ ಸಾಲ ನೀಡುತ್ತಾ ಬಂದಿದ್ದು ಸಾಲಹಂಚಿಕೆ, ವಸೂಲಾತಿ, ಠೇವಣಿ ಸಂಗ್ರಹಣೆ, ಸ್ವಸಹಾಯ ಗುಂಪುಗಳ ರಚನೆ ಹಾಗೂ ಸಾಲ ಜೋಡಣೆ ಮುಂತಾದ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಸಾಧಿಸುತ್ತಾ ಬಂದಿದೆ, ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ರೈತ ಬಾಂಧವರಿಗೆ ಸರ್ಕಾರದ ಆದೇಶದ ಪ್ರಕಾರ ಶೂನ್ಯ ಬಡ್ಡಿದರದಲ್ಲಿ ಬೆಳೆಸಾಲ ಮತ್ತು ಶೇಕಡ 3%ರ ಬಡ್ಡಿದರದಲ್ಲಿ ವ್ಯವಸಾಯ ಅಭಿವೃದ್ಧಿಗೆ ಮಧ್ಯಮಾವಧಿ ಸಾಲ ನೀಡುತ್ತಿರುತ್ತದೆ. ಹಾಗೂ ವ್ಯವಸಾಯೇತರ ಸಾಲಗಳಾದ ಗೃಹ ನಿರ್ಮಾಣ/ಖರೀದಿ, ಚಿನ್ನಾಭರಣ ಸಾಲ, ವಾಹನ ಸಾಲ ಒ.ಡಿ.ಸಾಲ, ನೌಕರ ವರ್ಗಕ್ಕೆ ಸಂಬಳಾಧಾರಿತ ಸಾಲ, ಸ್ಥಿರಾಸ್ತಿ ಆಧಾರದ ಮೇಲೆ ಸಾಲ, ಭೂ ಅಭಿವೃದ್ಧಿ ಸಾಲ, ಕ್ಯಾಷ್ ಕ್ರೆಡಿಟ್ ಸಾಲ, ಹೈನುಗಾರಿಕೆ ಸಾಲ, ಅವಧಿಸಾಲ, ಪಿ.ಎ.ಸಿ.ಎಸ್.ಗಳಿಗೆ ಬಹುಸೇವಾ ಕೇಂದ್ರ ಸಾಲ, ಅಪೆಕ್ಸ್ ಬ್ಯಾಂಕ್ ಪುನರ್ಧನ ಸಾಲ, ಸ್ವಸಹಾಯ ಸಂಘಗಳಿಗೆ (Sಊಉ) ಹಾಗೂ ಜಂಟಿ ಬಾದ್ಯತಾ ಗುಂಪುಗಳಿಗೆ (ಎಐಉ) ಸಾಲ ನೀಡುವ ಮೂಲಕ ಎಲ್ಲಾ ವರ್ಗದ ಸಹಕಾರಿ ಬಂಧುಗಳ ಸರ್ವತೋಮುಖ ಅಭಿವೃದ್ಧಿಗೆ ಆರ್ಥಿಕ ನೆರವು ನೀಡುತ್ತಿದೆ. ಬ್ಯಾಂಕ್ ಜಿಲ್ಲೆಯಾದ್ಯಂತ 9 ಶಾಖೆಗಳನ್ನು ಹೊಂದಿರುತ್ತದೆ. ಬ್ಯಾಂಕ್ ಪ್ರಸ್ತುತ ಸಂಪೂರ್ಣ ಗಣಕೀಕರಣಗೊಂಡಿದ್ದು, (Computerized) ಎಲ್ಲಾ 9 ಶಾಖೆಗಳು ಮತ್ತು ಪ್ರಧಾನ ಕಛೇರಿ CBS (Core Banking solution )ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಬ್ಯಾಂಕ್ ಗ್ರಾಹಕರಿಗೆ NEFT & RTGS, , ಸಾಲ ಪಡೆದಿರುವ ರೈತರಿಗೆ Rupay KCC Card, SB ಖಾತೆ ಹೊಂದಿರುವ ಗ್ರಾಹಕರಿಗೆ Rupay Debit Card ಗಳನ್ನು ನೀಡಲಾಗುತ್ತಿದೆ. ಮತ್ತು ಗ್ರಾಹಕರಿಗೆ SMS ಸೌಲಭ್ಯ ನೀಡಲಾಗುತ್ತಿದೆ.